Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಕೊಡಗು ಜಿಲ್ಲೆ

ಕೊಡಗು ಜಿಲ್ಲೆ ಸುದ್ದಿಗಳು

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ
ಕೊಡಗು ಜಿಲ್ಲೆ

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ

ಅಕ್ಟೋಬರ್ 2, 2026

ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಳ ಪರಿಶೀಲನೆ
ಕೊಡಗು ಜಿಲ್ಲೆ•ಅಕ್ಟೋಬರ್ 2, 2026

ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಳ ಪರಿಶೀಲನೆ

*

ಭಾರಿ ಗಾಳಿ ಮಳೆಗೆ ರಸ್ತೆಗುರುಳಿದ ವಿದ್ಯುತ್ ಕಂಬ, ಮರಗಳು. ,ಗ್ರಾಮಸ್ಥರಿಂದ ಮರ ತೆರವು
ಕೊಡಗು ಜಿಲ್ಲೆ•ಅಕ್ಟೋಬರ್ 1, 2026

ಭಾರಿ ಗಾಳಿ ಮಳೆಗೆ ರಸ್ತೆಗುರುಳಿದ ವಿದ್ಯುತ್ ಕಂಬ, ಮರಗಳು. ,ಗ್ರಾಮಸ್ಥರಿಂದ ಮರ ತೆರವು

ಕೊಡಗು ವರದಿ ನ್ನೂಸ್

ಮೂರು ರಾಷ್ಟ್ರೀಯ ಹಾಗೂ ಒಂದು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಕಡ್ಲೇರ ತುಳಸಿ ಮೋಹನ್ ಅವರಿಗೆ ಸನ್ಮಾನ
ಕೊಡಗು ಜಿಲ್ಲೆ•ಅಕ್ಟೋಬರ್ 1, 2026

ಮೂರು ರಾಷ್ಟ್ರೀಯ ಹಾಗೂ ಒಂದು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಕಡ್ಲೇರ ತುಳಸಿ ಮೋಹನ್ ಅವರಿಗೆ ಸನ್ಮಾನ

ನಾಪೋಕ್ಲು: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರು ಮೂರು ರಾಷ್ಟ್ರೀಯ ಮಟ್ಟದ ಹಾಗೂ ಒಂದು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಅವರನ್ನು ಮಡಿಕೇರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ಸಂದರ್ಭದಲ್ಲಿ ಸರಳವಾಗಿ ಸನ್ಮಾನಿಸಲಾಯಿತು. ಪ್ರಶಸ್ತಿಗಳ ವಿವರ ಹಾಗೂ ವಿವರಣೆ: ಸ್ಟಾರ್ ಆಫ್ ಕರ್ನಾಟಕ (ರಾಜ್ಯ ಪ್ರಶಸ್ತಿ): ಇಂಡಿಯನ್ ಸೋಶಿಯಲ್ ವರ್ಕರ್ಸ್ ಅಸೋಸಿಯೇಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಧಕರ ಅಭಿವೃದ್ಧಿ ಮಂಡಳಿ ಟ್ರಸ್ಟ್ ಸಹಭಾಗಿತ್ವದಲ್ಲಿ ಕುಂದಾಪುರದಲ್ಲಿ ನಡೆದ ‘ಸಂಸ್ಕೃತ ಉತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ’ದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರಾಷ್ಟ್ರೀಯ ಪ್ರಶಸ್ತಿ: ಜನಸೇವಾ ಫೌಂಡೇಶನ್ ಕರ್ನಾಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ಅಲಿಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರಶಸ್ತಿ: ಸತ್ವ ಫೌಂಡೇಶನ್ ಕರ್ನಾಟಕ ಹಾಗೂ ಚಿರಾಯು ಕನ್ನಡ ವಾಹಿನಿ ಅವರ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಸಂದರ್ಭದಲ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ. ✍️ ದುಗ್ಗಳ ಸದಾನಂದ.

ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ  ಮತ್ತು ಪದಗ್ರಹಣ ಕಾರ್ಯಕ್ರಮ
ಕೊಡಗು ಜಿಲ್ಲೆ•ಅಕ್ಟೋಬರ್ 1, 2026

ಕೊಡ್ಲಿಪೇಟೆಯಲ್ಲಿ ಕರವೇ ನೂತನ ಸದಸ್ಯರ ಸೇರ್ಪಡೆ ಮತ್ತು ಪದಗ್ರಹಣ ಕಾರ್ಯಕ್ರಮ

ಸೋಮವಾರಪೇಟೆ : ಕೊಡ್ಲಿಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ಆವರಣದಲ್ಲಿ ನಡೆದ ಸಂಘಟನೆಯ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿಗಳು ರಾಜ್ಯ ಸಂಚಾಲಕರು ದೀಪಾ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು ಕವಿತಾ ಪ್ರಾಥನೆ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಸಂಘಟಕ ಹೋರಾಟಗಾರ ವಸಂತ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕರವೇ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ದಾಸ್ ಮಾತನಾಡಿ ಕರವೇ ಶಿಸ್ತು ಹಾಗೂ ಪಾಲಿಸಬೇಕಾದ ನಿಯಮಾವಳಿಗಳು , ಕಾರ್ಯಕರ್ತರು ನಾಡು. ನುಡಿ ,ಜಲರಕ್ಷಣೆ , ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಹೋರಾಟಕ್ಕೆ ಸಿದ್ದರಿರಲು ಕಿವಿಮಾತುಗಳನ್ನು ಹೇಳಿದರು. ಸಂಘಟನೆ ಪರವಾಗಿ. ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಕುಡುಪಜೆ. ಕುಶಾಲನಗರ ತಾಲೋಕು ಅಧ್ಯಕ್ಷ .ಬಿ. ಜೆ. ಅಣ್ಣಯ್ಯ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದೀಪಾ ಪೂಜಾರಿಯವರು ಕೊಡ್ಲಿಪೇಟೆಯಲ್ಲಿ ಕರವೇ ಹೋಬಳಿ ಘಟಕ ಆಸ್ತಿತ್ವಕ್ಕೆ ಬಂದಿದ್ದು ನನಗೆ ಹರ್ಷ ತಂದಿದೆ. ಅದರಲ್ಲಿ ನೀವು ಸ್ಥಳೀಯ ಸಮಸ್ಯೆಗಳಿಗೆ ಹೋರಾಡಿ ನಾಗರಿಕರಿಗೆ ನೆಮ್ಮದಿ ಹಾಗೂ ಶಾಂತಿ ಬಧುಕನ್ನು ಕಟ್ಟಿಕೊಡಬೇಕು, ಅಣ್ಣಾ ನಾರಾಯಣ ಗೌಡರ "ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮಾ "ಎಂಬ ಘೋಷಣೆಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು. ಕನ್ನಡ ಭಾಷೆ ಬೆಳೆಸುವ ನಾಡು ಕಟ್ಟುವ ಕಾಯಕ ನಿಮ್ಮಿದ ಆಗಬೇಕಿದೆ ಎಂದರು. ಕೊಡ್ಲಿಪೇಟೆ ಹೋಬಳಿ ನೂತನ ಅಧ್ಯಕ್ಷರಾಗಿ ಶೋಭಿತ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ವಸಂತ್ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಸಂಘಟನೆಗೆ ಶ್ರಮಿಸಿದ ಶ್ರೀಮತಿ ಸುಪ್ರಿತಾರವರನ್ನು ಶಾಲು ಹಾರ ಹಾಕಿ ಗೌರವಿಸಲಾಯಿತು. ಸಭೆಯಲ್ಲಿ ಕುಶಾಲನಗರ ತಾಲೋಕು ಉಪಾಧ್ಯಕ್ಷರು ಪಯಾಜ್ಉದ್ದಿನ್, ಪ್ರದಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಸೋಮವಾರಪೇಟೆ ತಾಲೋಕು ಅಧ್ಯಕ್ಷ ಸಂತೋಷ್, ಅಧ್ಯಕ್ಷೆ ಆಶಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ,ಕುಶಾಲನಗರ ತಾಲೋಕು ಪ್ರದಾನ ಕಾರ್ಯದರ್ಶಿ ಗೀತಾ ಹಾಗೂ ಕೊಡ್ಲಿಪೇಟೆ ಕವಿತಾ ರೂಪ ಮೇನಕ ಮಮತಾ ಹಾಜರಿದ್ದರು. 60 ತಕ್ಕೂ ಹೆಚ್ಚು ಕಾರ್ಯಕರ್ತರು ಸಂಘಟನೆಗೆ ಸೇರಿಕೊಂಡರು ಎಲ್ಲರಿಗೂ ಕನ್ನಡ ಶಲ್ಯ ಹಾಕಿ ಗೌರವಪೂರ್ವಕವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. .ಸಂಘಟಕ ಅವಿನಾಶ್ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಯವಾಯಿತು.

ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿಯ ಪ್ರಗತಿ ಪರಿಶೀಲನಾ ಸಭೆ
ಕೊಡಗು ಜಿಲ್ಲೆ•ಅಕ್ಟೋಬರ್ 1, 2026

ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿಯ ಪ್ರಗತಿ ಪರಿಶೀಲನಾ ಸಭೆ

ಕುಶಾಲನಗರ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ.ಪಿ. ಶಶಿಧರ್ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶಶಿಭೀಮಯ್ಯ, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಡಿ. ಅಣ್ಣಯ್ಯ ಮತ್ತು ಮುಸ್ತಫಾ ಹಾಗೂ ತಾಲ್ಲೂಕು ಸಮಿತಿಯ ಸದಸ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲಾಯಿತು.

ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ,  ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ
ಕೊಡಗು ಜಿಲ್ಲೆ•ಅಕ್ಟೋಬರ್ 1, 2026

ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ, ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ

ಕಳೆದ ತಿಂಗಳು ಸೆಪ್ಟೆಂಬರ್ 24 ರಂದು ಜರುಗಿದ ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಸಭೆ ಪ್ರಾರಂಭಗೊಳ್ಳುವ ಮುನ್ನವೇ ಗದ್ದಲ ಉಂಟಾಯಿತು. ಆಹ್ವಾನ ಪತ್ರಿಕೆಯಲ್ಲಿ ಅಧ್ಯಕ್ಷ ಬಿ.ಸಿ. ಮುರುಳಿ ಮಾದಯ್ಯ ಅವರ ಹೆಸರಿದ್ದರೂ, ಸಭೆಯನ್ನು ಉಪಾಧ್ಯಕ್ಷ ಬಿ.ಎನ್.ಕಾಶಿ ಅವರು ಮುನ್ನಡೆಸಲು ಹೊರಟಿದ್ದುದೇ ವಿವಾದಕ್ಕೆ ನಾಂದಿಯಾಯಿತು. ಸದಸ್ಯರಾದ ಸಿ.ಎಲ್.ವಿಶ್ವ, ನಂಗಾರು ಜಗ, ಮಹೇಶ್, ಲೋಕನಾಥ್, ಸುಮೇಶ್ ಹಾಗೂ ಎನ್.ಯು.ಅಚ್ಚಯ್ಯ ಸೇರಿ ಹಲವರು ಅಧ್ಯಕ್ಷ ಸ್ವತಃ ಸಭೆಯಲ್ಲಿ ಹಾಜರಿದ್ದರೂ ಉಪಾಧ್ಯಕ್ಷರಿಗೆ ಅಧ್ಯಕ್ಷತೆ ಏಕೆ ಎಂದು ಪ್ರಶ್ನಿಸಿದರು. ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹಿರಾತಿನ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಸಿಇಒ ಅವರಿಂದ ಸ್ಪಷ್ಟನೆ ಕೇಳಲಾಯಿತು. ಸಭೆಯನ್ನೇ ಮೊಟಕುಗೊಳಿಸಬೇಕೆಂಬ ಆಗ್ರಹವೂ ಕೇಳಿಬಂತು. ಗದ್ದಲ ತಣಿಸಲು ಮುಂದಾದ ಉಪಾಧ್ಯಕ್ಷ ಕಾಶಿ ಅವರು, ಅಧ್ಯಕ್ಷ ಮುರುಳಿ ಮಾದಯ್ಯ ಹಾಗೂ ನಿರ್ದೇಶಕರಾದ ಆರ್.ಕೆ.ಚಂದ್ರ, ಬಿ.ಎಸ್.ಧನಪಾಲ್ ಅವರನ್ನು ಮನವೊಲಿಸಿ ವೇದಿಕೆಗೆ ಕರೆತಂದ ಬಳಿಕ, ನಿರ್ದೇಶಕ ಮಹೇಶ್ ಚಂದ್ರ ಅವರು ವಿಷಯ ಬಿಚ್ಚಿಟ್ಟರು — ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅವರು ಸೋತಿದ್ದರಿಂದ, ನಿಯಮಾನುಸಾರ ಉಪಾಧ್ಯಕ್ಷರಿಗೆ ಅಧ್ಯಕ್ಷ ಸ್ಥಾನ ಒಪ್ಪಿಸಲಾಗಿದೆ ಎಂದರು. ಸಭೆಗಳಿಗೆ ಸಕಾಲಕ್ಕೆ ಬಾರದಿರುವುದು, ನಿರಂತರ ಗೈರುಹಾಜರಿ ಮತ್ತು ಸಾಲದ ಅರ್ಜಿಗಳಿಗೆ ಸಹಿ ಹಾಕುವಲ್ಲಿನ ವಿಳಂಬದಿಂದ ಆಡಳಿತ ವ್ಯವಸ್ಥೆ ಕುಂಠಿತಗೊಂಡಿತ್ತು ಎಂದೂ, ರಾಜೀನಾಮೆ ನೀಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಅವಿಶ್ವಾಸ ತರಲಾಯಿತು ಎಂದೂ ಸ್ಪಷ್ಟಪಡಿಸಿದರು. ಆರೋಪಗಳಿಗೆ ತಿರುಗೇಟು ನೀಡಿದ ಅಧ್ಯಕ್ಷ ಬಿ.ಸಿ. ಮುರಳಿ ಮಾದಯ್ಯ ಅವರು, ತುರ್ತು ಸಭೆಗಳೆರಡನ್ನು ಬಿಟ್ಟರೆ ಎಲ್ಲ ಮಾಸಿಕ ಸಭೆಗಳಿಗೂ ಹಾಜರಾಗಿರುವುದಾಗಿಯೂ, ಏಳು ವರ್ಷಗಳ ಅಧಿಕಾರಾವಧಿಯಲ್ಲಿ ಸಾಲ ವಿತರಣೆಯಲ್ಲಿ ಯಾವ ಸದಸ್ಯರಿಗೂ ಅನ್ಯಾಯ ಮಾಡಿಲ್ಲವೆಂದೂ ಹೇಳಿದರು. ವೈಯಕ್ತಿಕ ಕಾರಣಗಳಿಂದ ಮೂರು ತಿಂಗಳೊಳಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದನ್ನು ಮೂರು ದಿನ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು, ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿ ವೇದಿಕೆಯಿಂದ ಹೊರನಡೆದರು. *ನಂಜರಾಯಪಟ್ಟಣ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆ: ಶೇ.12 ಡಿವಿಡೆಂಟ್, ₹76.02 ಲಕ್ಷ ಲಾಭ ಘೋಷಣೆ* ಗದ್ದಲಗಳ ನಡುವೆ ಬೆಳಗ್ಗೆ ಉದ್ಘಾಟನೆಗೊಳ್ಳಬೇಕಾಗಿದ್ದ ಸಭೆಯು 12:30 ಕ್ಕೆ ಪ್ರಾರಂಭವಾಯಿತು, ಸುಮಾರು 2447 ಕ್ಕು ಅಧಿಕ ಸದಸ್ಯರ ಸಂಖ್ಯಾಬಲವಿರುವ ಸಂಘದ ಸಭೆಯಲ್ಲಿ ಗಲಭೆ ಗದ್ದಲಗಳಿಂದ ಬೇಸತ್ತಿದ್ದ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರಿದ್ದರು. ಅಧ್ಯಕ್ಷ ಕಾಶಿಯವರ ಅನುಮತಿಯ ಮೇರೆಗೆ ಸಭೆಯಲ್ಲಿ ಮಾತನಾಡಿದ ನಿರ್ದೇಶಕರಾದ ಮಹೇಶ್ ಚಂದ್ರ ಅವರು, ಸಭೆಗೆ ಆಗಮಿಸಿದ ಸದಸ್ಯರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ, ಸ್ವಸಹಾಯ ಗುಂಪುಗಳಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಪತ್ರಕರ್ತ ಮಿತ್ರರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸ್ವಾಗತ ಕೋರಿ ಮಾತು ಆರಂಭಿಸಿದರು. ಆರ್ಥಿಕ ಸಾಧನೆ ಕುರಿತು ಮಹೇಶ್ ಚಂದ್ರ ಸಭೆಯಲ್ಲಿ ಹೇಳಿಕೆ ನೀಡುತ್ತಾ "ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ವರ್ಷ ₹76.02 ಲಕ್ಷ ಲಾಭ ಗಳಿಸಿದೆ. ಸಂಘದಲ್ಲಿ 2,447 ಸದಸ್ಯರಿದ್ದು ₹3.36 ಕೋಟಿ ಪಾಲು ಬಂಡವಾಳ ಹೊಂದಿದೆ" ಎಂದು ಅವರು ತಿಳಿಸಿದರು. ಠೇವಣಿ ಮತ್ತು ಸಾಲ ವಿವರ ನೀಡಿದ ಅವರು, "ಸಂಘದಲ್ಲಿ ಸಂಚಯ ಠೇವಣಿ ₹12.04 ಕೋಟಿ, ನಿರಖು ಠೇವಣಿ ₹26.96 ಕೋಟಿ ಸೇರಿ ಒಟ್ಟು ₹40.77 ಕೋಟಿ ಠೇವಣಿ ಇದೆ. ಕೃಷಿ ಸಾಲ ₹11 ಕೋಟಿ, ಮಧ್ಯಮಾವಧಿ ಸಾಲ ₹4 ಕೋಟಿ, ಜಾಮೀನು ಸಾಲ ₹6 ಕೋಟಿ, ಗೃಹ ಸಾಲ ₹9 ಕೋಟಿ ಸೇರಿ ಒಟ್ಟು ₹37.62 ಕೋಟಿ ಸಾಲ ವಿತರಿಸಲಾಗಿದೆ" ಎಂದು ವಿವರಿಸಿದರು. ವ್ಯಾಪಾರ ವಿಭಾಗದಲ್ಲಿ ಕಳೆದ ವರ್ಷದ ₹9.27 ಕೋಟಿಗೆ ಹೋಲಿಸಿದರೆ ಈ ವರ್ಷ ₹10.48 ಕೋಟಿ ವಹಿವಾಟು ನಡೆಸಲಾಗಿದೆ ಎಂದೂ ಅವರು ತಿಳಿಸಿದರು. ಸಂಘದ ಬಳಿ ಇರುವ 1 ಲಾರಿ ಹಾಗೂ 2 ಟ್ರಾಕ್ಟರ್‌ಗಳನ್ನು ರೈತ ಸದಸ್ಯರಿಗೆ ಉಳುಮೆ, ಕೃಷಿ ಕೆಲಸ ಮತ್ತು ಸಾಗಾಣಿಕೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು. *ಡಿವಿಡೆಂಟ್ ಮತ್ತು ಬೋನಸ್:* "ಸಂಘದ ಆಡಳಿತ ಮಂಡಳಿ ಸಭೆ ಈ ವರ್ಷ ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಟ್ ಹಾಗೂ ಸಿಬ್ಬಂದಿಗೆ 2 ತಿಂಗಳ ಬೋನಸ್ ವಿತರಿಸಲು ತೀರ್ಮಾನಿಸಿದೆ" ಎಂದು ಮಹೇಶ್ ಚಂದ್ರ ಸಭೆಯ ಅನುಮೋದನೆ ಕೋರಿದರು. *ಮೂಲಸೌಕರ್ಯ ಯೋಜನೆಗಳು:* ಮುಖ್ಯ ಕಚೇರಿಯ ಹಿಂಭಾಗ ನೌಕರರು, ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ, ಗುಡ್ಡೆಹೊಸೂರು ಶಾಖೆಯ ಮುಂಭಾಗ ಶೀಟ್ ಮತ್ತು ಇಂಟರ್‌ಲಾಕ್ ಕಾಮಗಾರಿ, ವಾಲ್ಲೂರು ಶಾಖೆಯ ಮೊದಲ ಅಂತಸ್ತಿನ ಮೆಟ್ಟಿಲಿನ ಬಳಿ ಗ್ರಾಹಕರ ಅನುಕೂಲ ಹಾಗೂ ಮಳೆಗಾಲದಲ್ಲಿ ಗೊಬ್ಬರ ಲೋಡ್-ಅನ್‌ಲೋಡ್‌ಗೆ ನೆರವಾಗುವಂತೆ ಶೀಟ್ ಅಳವಡಿಕೆ, ಹಾಗೂ ಕುಡಿಯುವ ನೀರಿನ ಘಟಕದ ಮೇಲ್ಭಾಗದಲ್ಲಿ ರಾತ್ರಿ ಕಾವಲುಗಾರರ ಕೊಠಡಿ ನಿರ್ಮಾಣ ಯೋಜನೆಗಳಿಗೆ ಸಭೆಯ ಅನುಮತಿ ಕೋರಿದರು. *ಕುಡಿಯುವ ನೀರಿನ ಘಟಕ:* "ಸಂಘದ ಕುಡಿಯುವ ನೀರಿನ ಘಟಕ ನಷ್ಟದಲ್ಲಿದ್ದು, ಸದಸ್ಯರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ 20 ಲೀಟರ್ ನೀರಿಗೆ ₹5 ದರ ನಿಗದಿಪಡಿಸಲು ತೀರ್ಮಾನಿಸಲಾಗಿದೆ" ಎಂದು ಅವರು ತಿಳಿಸಿದರು. *ಶಾಖೆಗಳು ಮತ್ತು ಸೇವೆಗಳು:* ಸಂಘವು ನಂಜರಾಯಪಟ್ಟಣ, ವಾಲ್ಲೂರು ಮತ್ತು ಗುಡ್ಡೆಹೊಸೂರು ಗ್ರಾಮಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಇವುಗಳ ಮೂಲಕ ರಸಗೊಬ್ಬರ, ದಿನಸಿ, ಕ್ರಿಮಿನಾಶಕ, ಕೀಟನಾಶಕ ಹಾಗೂ ಗ್ರಾಹಕರ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಮಹೇಶ್ ಚಂದ್ರ ವಿವರಿಸಿದರು. ಸಂಘದ ವ್ಯಾಪ್ತಿಯ ಶಾಲೆಗಳ 10ನೇ ಮತ್ತು 7ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 6 ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಗುವುದು ಎಂದು ಮಹೇಶ್ ಚಂದ್ರ ಪ್ರಕಟಿಸಿದರು. "ಸ್ವಸಹಾಯ ಸಂಘದ ಸದಸ್ಯರ ಅನುಕೂಲಕ್ಕಾಗಿ ಸ್ಥಳೀಯ ಸ್ವಸಹಾಯ ಸಂಘಗಳಿಗೆ ₹10 ಲಕ್ಷ ಸಾಲ ನೀಡಲಾಗುವುದು. ಈ ವರ್ಷ ನಂಜರಾಯಪಟ್ಟಣ ಧವಸ ಭಂಡಾರಕ್ಕೆ ₹8 ಲಕ್ಷ ಸಾಲ ವಿತರಿಸಲಾಗಿದ್ದು, ಮುಂದಿನ ವರ್ಷದಿಂದ ಸ್ಥಳೀಯ ಧವಸ ಭಂಡಾರ ಹಾಗೂ ಸಹಕಾರ ಸಂಘಗಳಿಗೆ ₹20 ಲಕ್ಷ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಸದಸ್ಯರಿಗೆ ವ್ಯಾಪಾರ ಸಾಲ ಹಾಗೂ ಪಿಗ್ಮಿ ಸಾಲದ ಮೊತ್ತವನ್ನೂ ಹೆಚ್ಚಿಸಲಾಗುವುದು" ಎಂದು ಮಹೇಶ್ ಚಂದ್ರ ಸಭೆಗೆ ತಿಳಿಸಿದರು. *ಐದು ದಶಕಗಳ ಭವ್ಯ ಇತಿಹಾಸವಿರುವ ಸಂಸ್ಥೆಯಲ್ಲಿ ಆಡಳಿತ ಮಂಡಳಿ, ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಇದಕ್ಕೆ ಆಂತರಿಕ ಕಲಹವೇ ಕಾರಣ ಎಂದು ಸದಸ್ಯರುಗಳು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು,* ​ಸಭೆಯಲ್ಲಿ ವಿಷಯ ಮಂಡಿಸಿದ ಸದಸ್ಯ ಲೋಕನಾಥ್ ಅವರು, ಆಡಳಿತ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪದೋಷಗಳು ಹಾಗೂ ವೈಫಲ್ಯಗಳನ್ನು ಪಟ್ಟಿ ಮಾಡಿ ಸಭೆಯ ಗಮನಕ್ಕೆ ತಂದರು. ಈ ಕೂಡಲೇ ಮಂಡಳಿಯು ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಸಂಸ್ಥೆಯ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು. ​ಇದೇ ವೇಳೆ ನಿರ್ದೇಶಕರ ಧೋರಣೆಯನ್ನು ಖಂಡಿಸಿದ ಸದಸ್ಯರಾದ ಸಿ.ಎಲ್. ವಿಶ್ವ, "ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ನಿರ್ದೇಶಕರು ತಮ್ಮ ವೈಯಕ್ತಿಕ ವೈಮನಸ್ಸಿನಿಂದ ಹಾಳುಮಾಡಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಒಗ್ಗಟ್ಟಿನಿಂದ ಮುನ್ನಡೆಯಬೇಕು" ಎಂದು ಆಗ್ರಹಿಸಿದರು. ​ಇನ್ನೊಂದೆಡೆ, ಗುಡ್ಡೆಹೊಸೂರು ಭಾಗದ ಬೆಳವಣಿಗೆಯ ದೃಷ್ಟಿಯಿಂದ ಮಾತೃ ಸಂಘದ ಮಾದರಿಯಲ್ಲೇ ಸದಸ್ಯರನ್ನು ವಿಂಗಡಿಸಿ, ಸಂಘವನ್ನು ವಿಭಜಿಸುವ ಮೂಲಕ ಪ್ರತ್ಯೇಕ ಬ್ಯಾಂಕಿಂಗ್ ವ್ಯವಹಾರಕ್ಕೆ ಚಾಲನೆ ನೀಡಬೇಕು ಎಂದು ಸದಸ್ಯರಾದ ನಂಗಾರು ಜಗ ,ಸಾಗರ್, ಪ್ರದೀಪ್ ಹಾಗೂ ಇತರರು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ಸಭೆಯಲ್ಲಿ ನಿರ್ದೇಶಕರುಗಳಾದ ಕೆ.ಡಿ.ದಾದಪ್ಪ, ವಿ.ಎಸ್.ರಾಜಪ್ಪ,ಎಸ್.ಎಸ್.ಕಾರ್ಯಪ್ಪ, ಎನ್.ಸಿ.ಪಂಚಾಕ್ಷರಿ, ಎಸ್.ಬಿ .ಅನಿತ,ಕೆ.ಕೆ .ಲೀಲಾವತಿ, ಟಿ .ಕೆ.ಉದಯಕುಮಾರ್ ಶಾಖೆಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಲತೀಶ್, ಸಿಬ್ಬಂದಿಗಳು ಹಾಗೂ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.