Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ

by Kodagu Varadi•ಅಕ್ಟೋಬರ್ 2, 2026
ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ
ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ image 1

​ಗುಡ್ಡೆಹೊಸೂರು : ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕೊಡಗು ಸುರಕ್ಷತಾ ಆಂದೋಲನ ಸಮಿತಿ ಹಮ್ಮಿಕೊಂಡಿರುವ ‘ಜನಜಾಗೃತಿ ವಾಹನ ಪ್ರಚಾರ ಜಾಥಾ’ ಶುಕ್ರವಾರ (ಅ.2) ಗುಡ್ಡೆಹೊಸೂರು ತಲುಪಿ ಸಮಾವೇಶಗೊಂಡಿತು. "ಜಾಗೃತ ಸಮಾಜ – ಸುರಕ್ಷಿತ ಭಾರತ" ಎಂಬ ಧ್ಯೇಯದೊಂದಿಗೆ ಸಾಗುತ್ತಿರುವ ಈ ಯಾತ್ರೆಯು, ಬೆಳಿಗ್ಗೆ ನೆಲ್ಲಿಹುದಿಕೇರಿಯಿಂದ ಹೊರಟು ಚೆಟ್ಟಳ್ಳಿ, ಸುಂಟಿಕೊಪ್ಪ ಹಾಗೂ 7ನೇ ಹೊಸಕೋಟೆ ಮೂಲಕ ಸಂಚರಿಸಿ ಜಾಥಾದಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಸಂದೇಶ ಬಿತ್ತರಿಸಿತು. ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಜಿಲ್ಲಾ ಪ್ರಮುಖರಾದ ಚಂದ್ರು ಉಡೋತ್ ಮಾತನಾಡಿ "ಜಾಗೃತ ಸಮಾಜ – ಸುರಕ್ಷಿತ ಭಾರತ" ಎಂಬ ಧ್ಯೇಯದೊಂದಿಗೆ ಸಾಗುತ್ತಿರುವ ಈ ಯಾತ್ರೆಯು, ಅಕ್ರಮ ವಲಸೆಯಿಂದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ, ಸ್ಥಳೀಯ ಕಾರ್ಮಿಕ ಮಾರುಕಟ್ಟೆ ಹಾಗೂ ಸಂಪನ್ಮೂಲಗಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದೆ, ಈ ಮೂಲಕ ರಾಷ್ಟ್ರದ ಸುರಕ್ಷತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಪ್ರತಿಪಾದಿಸಿದರು ಗುಡ್ಡೆಹೊಸೂರಿನಲ್ಲಿ ನಡೆದ ಸಮಾವೇಶದಲ್ಲಿ ಕೊಡಗು ಸುರಕ್ಷಾ ಆಂದೋಲನದ ಜಿಲ್ಲಾ ಪ್ರಮುಖರಾದ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಜಾತದ ಜಿಲ್ಲಾ ಸಂಚಾಲಕರಾದ ಬಿ.ಬಿ. ಭಾರತೀಶ್ ರವರು ಮಾತನಾಡಿ ರಾಷ್ಟ್ರದ ಆಂತರಿಕ ಭದ್ರತೆಗೆ ಮುಳುವಾಗಿರುವ ಅಕ್ರಮ ವಿದೇಶಿ ನುಸುಳು ಕೋರರನ್ನು ಪತ್ತೆ ಹಚ್ಚಿ ಗಡಿಪಾರು ಮಾಡವ ಕೆಲಸವಾಗಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ಗುಡ್ಡೆಹೊಸೂರು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶಶಿಕುಮಾರ್ ಹಾಗೂ ಪ್ರದೀಪ್, ಕೊಡೆಕಲ್ ನಿತ್ಯಾನಂದ, ಪ್ರವೀಣ್ ಕುಶಾಲಪ್ಪ, ಮಾವಜಿ ರಕ್ಷಿತ್, ಗಂಗಮ್ಮ , ಸೌಮ್ಯ ಭರತ್, ಅರುಣ, ಉತ್ತಪ್ಪ (ಚುಮ್ಮ) ನಿವೃತ್ತ ಸೈನಿಕರಾದ ಮರ್ಕಜೆ ವಿಶ್ವನಾಥ, ಗುಡ್ಡೆ ಮನೆ ವಿಶ್ವಕುಮಾರ್ ಹಾಗೂ ಅನೇಕ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ image 3ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಗುಡ್ಡೆಹೊಸೂರಿನಲ್ಲಿ ಜನಜಾಗೃತಿ ವಾಹನ ಪ್ರಚಾರ ಜಾಥಾ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!