Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಮೋದಿ ಅವರ 25 ವರ್ಷಗಳ ಸೇವೆಗೆ ನಮನ: ಮಡಿಕೇರಿಯಲ್ಲಿ 'ಸೇವಾ ಜ್ಯೋತಿ' ಜಾಥಾ

by Kodagu Varadi•ಅಕ್ಟೋಬರ್ 7, 2026BREAKING
ಮೋದಿ ಅವರ 25 ವರ್ಷಗಳ ಸೇವೆಗೆ ನಮನ: ಮಡಿಕೇರಿಯಲ್ಲಿ 'ಸೇವಾ ಜ್ಯೋತಿ' ಜಾಥಾ

ಮಡಿಕೇರಿ ಅ.07: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸೂತ್ರ ಹಿಡಿದು 25 ವರ್ಷಗಳು ಪೂರ್ಣಗೊಂಡ ಸಂಭ್ರಮದ ಅಂಗವಾಗಿ, ಕೊಡಗು ಜಿಲ್ಲಾ ಬಿಜೆಪಿ ಘಟಕವು ಇಂದು ನಗರದ ಗಾಂಧಿ ಮೈದಾನದಲ್ಲಿ 'ಸೇವಾ ಜ್ಯೋತಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆಯಿಂದಲೇ ಮೈದಾನದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜಮಾಯಿಸಿದ್ದರು. ಪ್ರಧಾನಿ ಅವರ ಭಾಷಣದ ನೇರ ಪ್ರಸಾರ ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಭ್ರಷ್ಟಾಚಾರದ ಕಳಂಕವಿಲ್ಲದೆ, ಚಹಾ ಮಾರುತ್ತಿದ್ದ ಹುಡುಗನೊಬ್ಬ ಪಕ್ಷ ಸಂಘಟಕನಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಬೆಳೆದ ಪಯಣ ಅಪರೂಪದ್ದು" ಎಂದು ಬಣ್ಣಿಸಿದರು. ಮೋದಿ ಅವರ ಆಡಳಿತ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, 25 ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸಿದರು.

ಮೋದಿ ಅವರ 25 ವರ್ಷಗಳ ಸೇವೆಗೆ ನಮನ: ಮಡಿಕೇರಿಯಲ್ಲಿ 'ಸೇವಾ ಜ್ಯೋತಿ' ಜಾಥಾ image 3ಮೋದಿ ಅವರ 25 ವರ್ಷಗಳ ಸೇವೆಗೆ ನಮನ: ಮಡಿಕೇರಿಯಲ್ಲಿ 'ಸೇವಾ ಜ್ಯೋತಿ' ಜಾಥಾ image 4

ಸಭೆಯ ಕೊನೆಯಲ್ಲಿ ಉಪಸ್ಥಿತರೆಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ 'ಸೇವಾ ಜ್ಯೋತಿ'ಯನ್ನು ಬೆಳಗಿಸಿ, ಗಾಂಧಿ ಮೈದಾನದಿಂದ ಹಳೆಯ ಖಾಸಗಿ ಬಸ್ ನಿಲ್ದಾಣದ ಮಾರ್ಗವಾಗಿ ಇಂದಿರಾಗಾಂಧಿ ವೃತ್ತದವರೆಗೆ ಜಾಥಾ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯೆ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೋದಿ ಅವರ 25 ವರ್ಷಗಳ ಸೇವೆಗೆ ನಮನ: ಮಡಿಕೇರಿಯಲ್ಲಿ 'ಸೇವಾ ಜ್ಯೋತಿ' ಜಾಥಾ image 6

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!