Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತ್ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್)

by Kodagu Varadi•ಅಕ್ಟೋಬರ್ 7, 2026BREAKING
ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತ್ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್)

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 123 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಗಿನ ಕೋಷ್ಟಕದ (2ನೇ ಅಂಕಣದಲ್ಲಿ ನಮೂದಿಸಿರುವ ಜಿಲ್ಲೆಗಳ (3)ನೇ ಅಂಕಣದಲ್ಲಿ ನಮೂದಿಸಿರುವ ಪ್ರತಿಯೊಂದು ತಾಲ್ಲೂಕು ಪಂಚಾಯತಿಗೆ ಆಯ್ಕೆಯಾಗುವ ಒಟ್ಟು ಸದಸ್ಯರ ಸಂಖ್ಯೆಯು ಕೋಷ್ಠಕದ (4) ನೇ ಅಂಕಣದಲ್ಲಿ ಇರುವಂತೆ ಹಾಗೂ ಕೋಷ್ಠಕದ 5, 6, 7 ಮತ್ತು 8ನೇ ಅಂಕಣದಲ್ಲಿ ನಮೂದಿಸಿರುವ ಸದಸ್ಯ ಸಂಖ್ಯೆಯನ್ನು ಕ್ರಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಿಂದುಳಿದ ವರ್ಗ "ಅ" ಮತ್ತು ಹಿಂದುಳಿದ ವರ್ಗ "ಬ" ಇವುಗಳಿಗೆ ಮೀಸಲಿರಿಸಲಾಗಿದ್ದು, ಅಂಕಣ (9) ರಲ್ಲಿ ನಮೂದಿಸಿರುವ ಸಂಖ್ಯೆ ಸಾಮಾನ್ಯ ವರ್ಗದ ಸ್ಥಾನಗಳೆಂದು ಮತ್ತು ಆವರಣಗಳಲ್ಲಿ ನಮೂದಿಸಿರುವ ಸ್ಥಾನಗಳು ಪ್ರತಿಯೊಂದು ಪ್ರವರ್ಗದಲ್ಲಿ ಮೀಸಲಿಟ್ಟಿರುವ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಲ್ಪಟ್ಟ ಸ್ಥಾನಗಳಂದೂ ನಿಗದಿಪಡಿಸಿ ಆದೇಶಿಸಿದೆ. ಸರ್ಕಾರವು ಈ ಹಿಂದೆ ಹೊರಡಿಸಿದ ಅಧಿಸೂಚನೆಗಳನ್ನು ರದ್ದು ಪಡಿಸಿದೆ.

ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತ್ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) image 3

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 162 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು ಈ ಕೆಳಗಿನ ಕೋಷ್ಠಕದ (2)ನೇ ಅಂಕಣದಲ್ಲಿನ ಪ್ರತಿಯೊಂದು ಜಿಲ್ಲಾ ಪಂಚಾಯತಿಗೆ ನಿಗದಿಪಡಿಸಲಾದ ಒಟ್ಟು ಸದಸ್ಯರ ಸಂಖ್ಯೆಯನ್ನು ಕೋಷ್ಠಕದ (3) ನೇ ಅಂಕಣದಲ್ಲಿ ಇರುವಂತೆ ಹಾಗೂ ಕೋಷಕದ 4, 5, 6 ಮತ್ತು 7ನೇ ಅಂಕಣದಲ್ಲಿ ನಮೂದಿಸಿರುವ ಸದಸ್ಯ ಸಂಖ್ಯೆಯನ್ನು ಕ್ರಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ 'ಅ' ಮತ್ತು ಹಿಂದುಳಿದ ವರ್ಗ "ಬ" ಇವುಗಳಿಗೆ ಮೀಸಲಿರಿಸಲಾಗಿದ್ದು, ಅಂಕಣ (8) ರಲ್ಲಿ ನಮೂದಿಸಿರುವ ಸಂಖ್ಯೆ ಸಾಮಾನ್ಯ ವರ್ಗದ ಸ್ಥಾನಗಳೆಂದು ಮತ್ತು ಆವರಣಗಳಲ್ಲಿ ನಮೂದಿಸಿರುವ ಸ್ಥಾನಗಳು ಪ್ರತಿಯೊಂದು ಪ್ರವರ್ಗದಲ್ಲಿ ಮೀಸಲಿಟ್ಟಿರುವ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಲ್ಪಟ್ಟ ಸ್ಥಾನಗಳೆಂದೂ ನಿಗದಿಪಡಿಸಿ ಆದೇಶಿಸಿದೆ. ಸರ್ಕಾರವು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿದೆ

ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತ್ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಯ ಅಧಿಸೂಚನೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) image 5

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!