Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಕೊಡಗು

35 ವರ್ಷಗಳಿಂದ ಜನಪರ ಹೋರಾಟ ಮಾಡಿದ ಪ್ರಾಮಾಣಿಕ ನಾಯಕ ವಿ.ಪಿ. ಶಶಿಧರ್: ಶಾಸಕ ಎ.ಎಸ್. ಪೊನ್ನಣ್ಣ ಶ್ಲಾಘನೆ

by Kodagu Varadi•ಸೆಪ್ಟೆಂಬರ್ 28, 2026
35 ವರ್ಷಗಳಿಂದ ಜನಪರ ಹೋರಾಟ ಮಾಡಿದ ಪ್ರಾಮಾಣಿಕ ನಾಯಕ ವಿ.ಪಿ. ಶಶಿಧರ್: ಶಾಸಕ ಎ.ಎಸ್. ಪೊನ್ನಣ್ಣ ಶ್ಲಾಘನೆ

ಕುಶಾಲನಗರದಲ್ಲಿ ನಡೆದ ವಿ.ಪಿ. ಶಶಿಧರ್ ಅವರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಶಿಧರ್ ಅವರ ರಾಜಕೀಯ ಪಯಣವನ್ನು ಸ್ಮರಿಸಿದರು.

ಮೊದಲು ಅವರು ಜನತಾದಳ ಜಾತ್ಯತೀತ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಾನು ಮತ್ತು ನನ್ನ ತಂದೆಯವರು ಎಚ್.ಡಿ. ದೇವೇಗೌಡರ ಜೊತೆಗೆ ಇದ್ದ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿತ್ತು. ಬಹಳ ದೊಡ್ಡ ಪ್ರಮಾಣದ ಸಭೆಯಲ್ಲಿ ಸಿದ್ದರಾಮಯ್ಯನವರು ಕೂಡ ಬಂದಿದ್ದರು ಎಂದು ನೆನಪಿಸಿಕೊಂಡರು.

ಕಳೆದ ವರ್ಷದಿಂದ ಶಶಿಧರ್ ಅವರು ನನಗೆ ಹತ್ತಿರದಿಂದ ಪರಿಚಯವಾಗಿದ್ದಾರೆ. ಅವರು ಪಕ್ಷದ ಒಳಗೆ, ಹೊರಗಡೆ ಇದ್ದು, ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ರಾಜಕೀಯ ನಡೆಸಿಕೊಂಡು ಬಂದಿದ್ದಾರೆ. ಇವತ್ತು ನಾವೆಲ್ಲ ಯಾಕೆ ಅವರನ್ನು ಇಷ್ಟೊಂದು ಪ್ರೀತಿಸುತ್ತೇವೆ ಎಂದರೆ, ಪ್ರಸ್ತುತ ರಾಜಕಾರಣ ವ್ಯವಸ್ಥೆ ದಾರಿ ತಪ್ಪುವ ಸಂದರ್ಭದಲ್ಲಿ ಅವರಂತಹ ಪ್ರಾಮಾಣಿಕತೆ ಅನಿವಾರ್ಯವಾಗಿದೆ ಎಂದರು.

ಮೂವತ್ತೈದು ವರ್ಷಗಳ ಕಾಲ ಬದುಕನ್ನು ಜನರಿಗಾಗಿ ಮೀಸಲಿಟ್ಟು, ಯಶಸ್ಸನ್ನು ಕಂಡಿದ್ದಾರೆ. ಅನೇಕ ಬಾರಿ ನಾನು ಕೂಡ ಅವರ ಜೊತೆ ಕೆಲವು ವಿಚಾರಗಳನ್ನು ಚರ್ಚಿಸಿದ್ದೇನೆ. ಅವರ ಅಭಿಪ್ರಾಯಗಳಿಗೆ ಗೌರವ ಕೊಡುವ ಕೆಲಸವನ್ನು ನಾನು ಮಾಡಿದ್ದೇನೆ. 2020ರಿಂದ ಸಕ್ರಿಯವಾಗಿ ರಾಜಕೀಯದಲ್ಲಿ ಆರು ವರ್ಷ ಕಳೆದಿದ್ದೇನೆ, ಆದರೆ ಅವರು 35 ವರ್ಷಗಳಿಂದ ನಿರಂತರ ಹೋರಾಟದಲ್ಲಿದ್ದಾರೆ. ಅಂತಹ ನಾಯಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕರು ಹೇಳಿದರು.

ವೇದಿಕೆಯಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!