ಮಡಿಕೇರಿ ಅ.05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಪ್ರವಾಸಿಗರು ಹಾಗೂ ಭಕ್ತರಿಗಾಗಿ "ಕೊಡಗಿನ ಅನುಭವ... ಭಕ್ತಿಯ ಪಯಣ... ಪ್ರಕೃತಿಯ ಮಡಿಲು" ಎಂಬ ಘೋಷವಾಕ್ಯದೊಂದಿಗೆ ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ಆರಂಭಿಸಲಾಗಿದೆ. ಮಡಿಕೇರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಈ ಪ್ರವಾಸಗಳು ಹೊರಡಲಿವೆ. ಪ್ರವಾಸದಲ್ಲಿ ಎರಡು ಪ್ಯಾಕೇಜ್ಗಳಿದ್ದು. "ಕೊಡಗಿನ ಸೊಬಗು" ಪ್ಯಾಕೇಜ್ನಲ್ಲಿ ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಡ್ಯಾಮ್ ಮತ್ತು ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಕಾಫಿ ಪ್ಲಾಂಟೇಷನ್ ಟೂರ್, ಅಬ್ಬಿ ಫಾಲ್ಸ್ ಹಾಗೂ ರಾಜಾಸೀಟ್ಗೆ ಭೇಟಿ ನೀಡಲಾಗುತ್ತದೆ. "ಕಾವೇರಿ ದರ್ಶನ" ಪ್ಯಾಕೇಜ್ನಲ್ಲಿ ಓಂಕಾರೇಶ್ವರ ದೇವಸ್ಥಾನ, ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ, ತಲಕಾವೇರಿ, ಅಬ್ಬಿ ಫಾಲ್ಸ್ ಹಾಗೂ ರಾಜಾಸೀಟ್ ಸೇರಿವೆ. ಈ ಪ್ರವಾಸವು ಅಕ್ಟೋಬರ್ 11ರಿಂದ 25ರವರೆಗೆ ಇರಲಿದ್ದು, ದೊಡ್ಡವರಿಗೆ ₹400 ಹಾಗೂ ಮಕ್ಕಳಿಗೆ ₹300 ಟಿಕೆಟ್ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಬುಕಿಂಗ್ಗಾಗಿ ಮೊ.ಸಂ. 6360308963, 9481106351 ಅಥವಾ 9731068637 ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕರಾದ ರಾಮ್ಚಂದ್ ದರ್ಶನ್ ತಿಳಿಸಿದ್ದಾರೆ.




ಕಾಮೆಂಟ್ಗಳು (0)