Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಮಡಿಕೇರಿಯಲ್ಲಿ ಅ.16ರಂದು 13ನೇ ವರ್ಷದ ಮಕ್ಕಳ ದಸರಾ

by Kodagu Varadi•ಅಕ್ಟೋಬರ್ 5, 2026BREAKING
ಮಡಿಕೇರಿಯಲ್ಲಿ ಅ.16ರಂದು 13ನೇ ವರ್ಷದ ಮಕ್ಕಳ ದಸರಾ

ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ವತಿಯಿಂದ 13ನೇ ವರ್ಷದ ‘ಮಕ್ಕಳ ದಸರಾ – 2026’ ಕಾರ್ಯಕ್ರಮವನ್ನು ಅಕ್ಟೋಬರ್ 16ರ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳದ್ದೇ ಸಂಭ್ರಮ, ಮಕ್ಕಳದ್ದೇ ಸಡಗರ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಂತೆ, ಮಕ್ಕಳಿಂದ ಅಂಗಡಿ, ಛದ್ಮವೇಷ, ಪ್ಲೇ ಮಾಡೆಲಿಂಗ್ ಹಾಗೂ ಮಕ್ಕಳಿಂದ ಮಂಟಪ ಸ್ಪರ್ಧೆಗಳು ನಡೆಯಲಿವೆ. 10ನೇ ತರಗತಿಯೊಳಗಿನ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು: ಮಕ್ಕಳ ಸಂತೆ: 9741523484, 9449915522 ಮಕ್ಕಳಿಂದ ಅಂಗಡಿ ಸ್ಪರ್ಧೆ: 9449713748, 9972963151 ಮಕ್ಕಳಿಂದ ಮಂಟಪ: 9538101863, 9380595964 ಛದ್ಮವೇಷ ಸ್ಪರ್ಧೆ: 9448976405, 9449833179 ಪ್ಲೇ ಮಾಡೆಲಿಂಗ್: 9591064297, 9902362038 ಮಕ್ಕಳ ಸಡಗರದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಆದರದ ಸ್ವಾಗತ ಕೋರಲಾಗಿದೆ.

ಮಡಿಕೇರಿಯಲ್ಲಿ ಅ.16ರಂದು 13ನೇ ವರ್ಷದ ಮಕ್ಕಳ ದಸರಾ image 3ಮಡಿಕೇರಿಯಲ್ಲಿ ಅ.16ರಂದು 13ನೇ ವರ್ಷದ ಮಕ್ಕಳ ದಸರಾ image 4ಮಡಿಕೇರಿಯಲ್ಲಿ ಅ.16ರಂದು 13ನೇ ವರ್ಷದ ಮಕ್ಕಳ ದಸರಾ image 5

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!