Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಬೋಳ್ಳಮ್ಮ ನಾಣಯ್ಯ

by Kodagu Varadi•ಅಕ್ಟೋಬರ್ 4, 2026BREAKING
ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಬೋಳ್ಳಮ್ಮ ನಾಣಯ್ಯ
ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಬೋಳ್ಳಮ್ಮ ನಾಣಯ್ಯ image 3

ನಾಪೋಕ್ಲು : ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಕಾಣುತ್ತಿದೆ ಎಂದು ಭಗವತಿ ಮಹಿಳಾ ಸಮಾಜದ ಅಧ್ಯಕ್ಷಿ ಬೊಪ್ಪಂಡ ಬೋಳ್ಳಮ್ಮ ನಾಣಯ್ಯ ಹೇಳಿದರು. ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಭಗವತಿ ಮಹಿಳಾ ಸಮಾಜದ 2025 -26ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮಹಿಳಾ ಸಮಾಜ 90 ವಸಂತಗಳನ್ನು ಕಂಡಿದ್ದು ಇದರ ಸರ್ವತೋಮುಖ ಬೆಳವಣಿಗೆಗೆ ಹಲವು ಹಿರಿಯರ ಶ್ರಮದ ಬಗ್ಗೆ ಬೆಳಕು ಚೆಲ್ಲಿದರು. ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷ ಬಿದ್ದಾಟoಡ ಮೇರಿ ಚಿಟ್ಟಿಯಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. ಈ ಸಂದರ್ಭ ಮಹಿಳಾ ಸಮಾಜದ ಬೆಳವಣಿಗೆ ವಿಷಯವಾಗಿ ಸಭೆಯಲ್ಲಿ ಮಾಹಿತಿಯನ್ನು ಪಡೆದುಕೊಂಡು ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಉಪಾಧ್ಯಕ್ಷೆ ನಾಟೋಳoಡ ಕಸ್ತೂರಿ , ಕಾರ್ಯದರ್ಶಿ ಬೊಪ್ಪಂಡ ಸ್ವಾತಿ ವಿರನ್ , ಸಹಕಾರಿದರ್ಶಿ ಶಿವಚಾಳಿಯಂಡ ರೋಹಿಣಿ , ನಿರ್ದೇಶಕರಾದ ಶಿವಚಾಳಿಯಂಡ ಪಾರ್ವತಿ ಬೆಳ್ಳಿಯಪ್ಪ ,ಶಿವಚಾಳಿಯಂಡ ದೇವಕಿ , ಶಿವಚಾಳಿಯಂಡ ಭೋಜಮ್ಮ ರಾಣಿ , ಚೀಯಕಪೂವಂಡ ಮುತ್ತುರಾಣಿ , ಬೊಪ್ಪಂದ ಯಶೋಧ , ಪೊರುಕುವಂಡ ,ಭಾಗ್ಯವತಿ (ಕಾಂತಿ) , ಅರೆಯಡ ಸರಸು , ನೂರಂಬಾಡ ಗಾಯತ್ರಿ ,, ಕಲ್ಲೇಂಗಡ ಪವಿತ್ರ , ಅಜ್ಜೆಟಿರ ರಾಣಿ ಪಳಂಗಪ್ಪ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ಅರೆಯಡ ಸರಸು ಪ್ರಾರ್ಥಿಸಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬೊಪ್ಪಂಡ ಸ್ವಾತಿ ವಿರನ್ ಕಳೆದ ಸಾರಿನ ವರದಿ ಮಂಡಿಸಿ .ಪ್ರಸಕ್ತ ವರ್ಷದ ಆಡಳಿತ ಮಂಡಳಿ ವರದಿ ಯನ್ನು ಸಹಕಾರ್ಯದರ್ಶಿ ಶಿವಚಾಳಿಯಂಡ ರೋಹಿಣಿ ವಾಚಿಸಿದರೆ ಲೆಕ್ಕಪರಿಶೋಧನಾ ವರದಿ ಯನ್ನು ನಿರ್ದೇಶಕಿ ಕಲ್ಲೆಂಗಡ ಪವಿತ್ರ ವಾಚಿಸಿದರು. ನಿರ್ದೇಶಕಿ ಪೊರ್ಕೊಂಡ ಕಾಂತಿ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷರಾದ ನಾಟೋಳoಡ ಕಸ್ತೂರಿ ವಂದಿಸಿದರು. ಬಳಿಕ ಹಳೆ ತಾಲೂಕು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ✍️ದುಗ್ಗಳ ಸದಾನಂದ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!