Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಪ್ರವಾಸೋದ್ಯಮ

ತಲಕಾವೇರಿ ತೀರ್ಥೋದ್ಭವ: ಬಂದೋಬಸ್ತು, ವಾಹನ ಸಂಚಾರ ವ್ಯವಸ್ಥೆ ಪರಿಶೀಲನೆ

by Kodagu Varadi•ಅಕ್ಟೋಬರ್ 2, 2026BREAKING
ತಲಕಾವೇರಿ ತೀರ್ಥೋದ್ಭವ: ಬಂದೋಬಸ್ತು, ವಾಹನ ಸಂಚಾರ ವ್ಯವಸ್ಥೆ ಪರಿಶೀಲನೆ
ತಲಕಾವೇರಿ ತೀರ್ಥೋದ್ಭವ: ಬಂದೋಬಸ್ತು, ವಾಹನ ಸಂಚಾರ ವ್ಯವಸ್ಥೆ ಪರಿಶೀಲನೆ image 1

ಮಡಿಕೇರಿ: ತಲಕಾವೇರಿಯಲ್ಲಿ ಇದೇ 17ರಂದು ಸಂಜೆ ತುಲಾ ಸಂಕ್ರಮಣದ ಕಾವೇರಿ ತೀರ್ಥೋದ್ಭವ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಸಂದರ್ಭ ಕೈಗೊಳ್ಳಬೇಕಾದ ಬಂದೋಬಸ್ತು ಹಾಗೂ ವಾಹನ ಸಂಚಾರ ವ್ಯವಸ್ಥೆಗಳ ಕುರಿತಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಣಿ ಆರ್.ಎನ್. ಬಿಂದುಮಣಿ (ಐಪಿಎಸ್) ಅವರ ನೇತೃತ್ವದಲ್ಲಿ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ತೀರ್ಥೋದ್ಭವದ ಪುಣ್ಯಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಸ್ಥಳ ಪರಿಶೀಲನೆ ಮಾಡಲಾಯಿತು.

ತಲಕಾವೇರಿ ತೀರ್ಥೋದ್ಭವ: ಬಂದೋಬಸ್ತು, ವಾಹನ ಸಂಚಾರ ವ್ಯವಸ್ಥೆ ಪರಿಶೀಲನೆ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!