
ಬೆಂಕಿ ರೋಗದ ಹತೋಟಿ ಕ್ರಮಗಳು ಗದ್ದೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ನೀಡಬಾರದು. ರೋಗದ ಬಾಧೆ ಕಂಡುಬಂದಲ್ಲಿ ಟ್ರೈಸೈಕ್ಲಜೋಲ್ 0.6 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವ ಸಂದರ್ಭದಲ್ಲಿ ಶಿಲೀಂಧ್ರನಾಶಕದ ಜೊತೆಗೆ ಅಂಟು ದ್ರಾವಣವನ್ನು ಸೇರಿಸುವುದು ಉತ್ತಮ. ಎಲೆ ಸುರುಳಿ ಹುಳು ಎಲೆ ಸುರುಳಿ ಹುಳುವಿನ ಬಾಧೆ ಸಸಿ ಮಡಿಗಳಲ್ಲಿ ಹಾಗೂ ನಾಟಿ ಮಾಡಿದ ಗದ್ದೆಗಳಲ್ಲಿ ಕಂಡುಬಂದರೆ, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿಯಂತೆ ಸುತ್ತಿಕೊಂಡು ಅದರ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಭತ್ತದ ಪೈರು ಬಿಳಿಚಿಕೊಂಡಂತೆ ಕಾಣುತ್ತದೆ. ಬಾಧೆ ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ, ತೆನೆ ಸರಿಯಾಗಿ ಬರದೆ ಇಳುವರಿ ನಷ್ಟವಾಗಬಹುದು. ಆದ್ದರಿಂದ ರೈತರು ಕೆಳಗೆ ಸೂಚಿಸಿರುವ ಕ್ರಮಗಳನ್ನು ಕೂಡಲೇ ಅನುಸರಿಸಬೇಕು. ಮೋಡ ಕವಿದ ವಾತಾವರಣ, ತುಂತುರು ಮಳೆ, ನಡುವೆ ನಡುವೆ ಬಿಸಿಲು ಹಾಗೂ ಮಳೆ ಬೀಳುವ ಪರಿಸ್ಥಿತಿಗಳು ಎಲೆ ಸುರುಳಿ ಹುಳುವಿನ ಬಾಧೆ ತೀವ್ರವಾಗಿ ಹರಡಲು ಕಾರಣವಾಗುತ್ತವೆ.

ಈ ಹುಳುವಿನ ಪತಂಗವು ತಿಳಿ ಹಳದಿ ಬಣ್ಣದಲ್ಲಿದ್ದು, ರೆಕ್ಕೆಗಳ ಮೇಲೆ ತೆಳುವಾದ ಕಪ್ಪು ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗವು ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರವಾಗಿ ಇಡುತ್ತದೆ. ಸುಮಾರು 4ರಿಂದ 7 ದಿನಗಳಲ್ಲಿ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಅವು 15ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ನಂತರ ಕೋಶಾವಸ್ಥೆಯನ್ನು ಪ್ರವೇಶಿಸುತ್ತವೆ. ಕೋಶಾವಸ್ಥೆಯು ಸುಮಾರು 6ರಿಂದ 8 ದಿನಗಳವರೆಗೆ ಇದ್ದು, ನಂತರ ಪ್ರೌಢ ಕೀಟ ಹೊರಬರುತ್ತದೆ. ಎಲೆ ಸುರುಳಿ ಹುಳುವಿನ ಹತೋಟಿ ಕ್ರಮಗಳು ಹುಳುವಿನ ನಿಯಂತ್ರಣಕ್ಕಾಗಿ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛವಾಗಿಡಬೇಕು. ಶಿಫಾರಸು ಮಾಡಿರುವ ಪ್ರಮಾಣದಲ್ಲಿಯೇ ಸಾರಜನಕ ಗೊಬ್ಬರವನ್ನು ನೀಡಬೇಕು. ಕೀಟದ ಬಾಧೆ ಕಂಡುಬಂದಲ್ಲಿ ಸೂಚನೆಯಂತೆ ಕ್ಲೋರಂಟ್ರಾನಿಲಿಪ್ರೋಲ್ 0.4 ಮಿ.ಲೀ ಅಥವಾ ಇಂಡಾಕ್ಸಕಾರ್ಬ್ 0.5 ಮಿ.ಲೀ. ಅಥವಾ ಫ್ಲುಬೆಂಡಮೈಡ್ 0.4 ಮಿ.ಲೀ. ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವಾಗ ಕೀಟನಾಶಕದೊಂದಿಗೆ ಅಂಟು ದ್ರಾವಣವನ್ನು ಸೇರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು,ಮಡಿಕೇರಿ ತಿಳಿಸಿರುತ್ತಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದ್ದು, ನಾಟಿ ಮಾಡಿದ 30ರಿಂದ 40 ದಿನಗಳಾಗಿರುವ ಈ ಸಂದರ್ಭದಲ್ಲಿ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆ ಸುರುಳಿ ಹುಳುವಿನ ಬಾಧೆ ಕಂಡುಬಂದಿದೆ. ಬೆಂಕಿ ರೋಗದ ಲಕ್ಷಣಗಳು ಆರಂಭದಲ್ಲಿ ಭತ್ತದ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳ ಗಾತ್ರ ಹೆಚ್ಚಾಗಿ, ಎಲೆಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳನ್ನು ಹೊಂದಿರುವ ಚುಕ್ಕೆಗಳು ಉಂಟಾಗುತ್ತವೆ. ಚುಕ್ಕೆಗಳ ಮಧ್ಯಭಾಗ ಬೂದಿ ಬಣ್ಣಕ್ಕೆ ತಿರುಗಿ, ಸುತ್ತಲೂ ಕಂದು ಬಣ್ಣ ಇರುತ್ತದೆ. ಇಂತಹ ಚುಕ್ಕೆಗಳು ಪರಸ್ಪರ ಸೇರಿಕೊಂಡಾಗ ಎಲೆಗಳು ಸುಟ್ಟುಹೋದಂತೆ ಕಾಣಿಸುತ್ತವೆ. ಬೆಂಕಿ ರೋಗದ ಹತೋಟಿ ಕ್ರಮಗಳು ಗದ್ದೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ನೀಡಬಾರದು. ರೋಗದ ಬಾಧೆ ಕಂಡುಬಂದಲ್ಲಿ ಟ್ರೈಸೈಕ್ಲಜೋಲ್ 0.6 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವ ಸಂದರ್ಭದಲ್ಲಿ ಶಿಲೀಂಧ್ರನಾಶಕದ ಜೊತೆಗೆ ಅಂಟು ದ್ರಾವಣವನ್ನು ಸೇರಿಸುವುದು ಉತ್ತಮ. ಎಲೆ ಸುರುಳಿ ಹುಳು ಎಲೆ ಸುರುಳಿ ಹುಳುವಿನ ಬಾಧೆ ಸಸಿ ಮಡಿಗಳಲ್ಲಿ ಹಾಗೂ ನಾಟಿ ಮಾಡಿದ ಗದ್ದೆಗಳಲ್ಲಿ ಕಂಡುಬಂದರೆ, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿಯಂತೆ ಸುತ್ತಿಕೊಂಡು ಅದರ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಭತ್ತದ ಪೈರು ಬಿಳಿಚಿಕೊಂಡಂತೆ ಕಾಣುತ್ತದೆ. ಬಾಧೆ ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ, ತೆನೆ ಸರಿಯಾಗಿ ಬರದೆ ಇಳುವರಿ ನಷ್ಟವಾಗಬಹುದು. ಆದ್ದರಿಂದ ರೈತರು ಕೆಳಗೆ ಸೂಚಿಸಿರುವ ಕ್ರಮಗಳನ್ನು ಕೂಡಲೇ ಅನುಸರಿಸಬೇಕು. ಮೋಡ ಕವಿದ ವಾತಾವರಣ, ತುಂತುರು ಮಳೆ, ನಡುವೆ ನಡುವೆ ಬಿಸಿಲು ಹಾಗೂ ಮಳೆ ಬೀಳುವ ಪರಿಸ್ಥಿತಿಗಳು ಎಲೆ ಸುರುಳಿ ಹುಳುವಿನ ಬಾಧೆ ತೀವ್ರವಾಗಿ ಹರಡಲು ಕಾರಣವಾಗುತ್ತವೆ. ಈ ಹುಳುವಿನ ಪತಂಗವು ತಿಳಿ ಹಳದಿ ಬಣ್ಣದಲ್ಲಿದ್ದು, ರೆಕ್ಕೆಗಳ ಮೇಲೆ ತೆಳುವಾದ ಕಪ್ಪು ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗವು ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರವಾಗಿ ಇಡುತ್ತದೆ. ಸುಮಾರು 4ರಿಂದ 7 ದಿನಗಳಲ್ಲಿ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಅವು 15ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ನಂತರ ಕೋಶಾವಸ್ಥೆಯನ್ನು ಪ್ರವೇಶಿಸುತ್ತವೆ. ಕೋಶಾವಸ್ಥೆಯು ಸುಮಾರು 6ರಿಂದ 8 ದಿನಗಳವರೆಗೆ ಇದ್ದು, ನಂತರ ಪ್ರೌಢ ಕೀಟ ಹೊರಬರುತ್ತದೆ. ಎಲೆ ಸುರುಳಿ ಹುಳುವಿನ ಹತೋಟಿ ಕ್ರಮಗಳು ಹುಳುವಿನ ನಿಯಂತ್ರಣಕ್ಕಾಗಿ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛವಾಗಿಡಬೇಕು. ಶಿಫಾರಸು ಮಾಡಿರುವ ಪ್ರಮಾಣದಲ್ಲಿಯೇ ಸಾರಜನಕ ಗೊಬ್ಬರವನ್ನು ನೀಡಬೇಕು. ಕೀಟದ ಬಾಧೆ ಕಂಡುಬಂದಲ್ಲಿ ಸೂಚನೆಯಂತೆ ಕ್ಲೋರಂಟ್ರಾನಿಲಿಪ್ರೋಲ್ 0.4 ಮಿ.ಲೀ ಅಥವಾ ಇಂಡಾಕ್ಸಕಾರ್ಬ್ 0.5 ಮಿ.ಲೀ. ಅಥವಾ ಫ್ಲುಬೆಂಡಮೈಡ್ 0.4 ಮಿ.ಲೀ. ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವಾಗ ಕೀಟನಾಶಕದೊಂದಿಗೆ ಅಂಟು ದ್ರಾವಣವನ್ನು ಸೇರಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು,ಮಡಿಕೇರಿ ತಿಳಿಸಿರುತ್ತಾರೆ.... ✍️ದುಗ್ಗಳ ಸದಾನಂದ


ಕಾಮೆಂಟ್ಗಳು (0)